Background:
Based on preliminary data, the Food and Agriculture Organisation of the United Nations predicts that
28 percent of livestock breeds are now at risk of extinction, and the current loss rate is estimated at
one breed per week with more than half of these breeds likely to be found in developing countries.
Objective:
Strengthened rural economies, sustainable agricultural practices and an environmental friendly
healthier lifestyle – the benefits of the Indian Cow are many. We aim at merging the traditional
goodness of the GauMata to contemporary forms and uses, backed with technology and complete
scientific evidence and validation. Our area of focus is rescue the cow’s which is taken to end their
life & provide good food & environment for them. Also focussed their Health, Environment,
Agriculture and Legal. If we lose these endangered cows, we as a society are sure to lose health,
ecology and safe farming practices.
Main Activities including Go shale :
Constant action will be plan from Samithi in its short existence in each of the areas of H.E.A.L.( Health,
Environment, Agriculture and Legal.) Will conduct PanchGavya health camps in multiple villages, Plan
to training farmer groups on Natural farming, over-seeing the establishment of Desi Cow dairy farms,
establishing Self Help Groups for production of cow-based FMCG products in the villages (Fast-
moving consumer goods), working with the government and its machinery to prevent illegal slaughter
of cows are activities that the Samithi will carries out on a regular basis.
For centuries, man has abused nature and exploited all its resources but it is only now that he has
begun to realise the extent of damage caused. Life which will usher in a lifestyle that is not just
sustainable, natural and organic but also enriching. Milk that is healthier, food that is chemical free,
daily use products that sustain life – all made from techniques using the Indian Cow.
ಗೋಗುದ್ಧ ದಲ್ಲೊಂದು ದೇಶಿ ಗೋಶಾಲೆಯ ನಿರ್ಮಾಣ :
ಪೀಠಿಕೆ :
ವಿಶ್ವದಲ್ಲೇ ಅತಿಹೆಚ್ಚು ಪಶುಸಂಪತ್ತುಳ್ಳ ದೇಶ ಭಾರತ. ಗೋವಂಶದಿಂದ ಮನುಷ್ಯನಿಗಾಗುವ
ಪ್ರಯೋಜನವನ್ನು ಮನಗಂಡದ್ದಿಂದಲೇ ನಮ್ಮ ಪೂರ್ವಜರು ದನಕರುಗಳ ಸಂರಕ್ಷಣೆಗೆ ಮಹತ್ವ ನೀಡಿದ್ದಲ್ಲದೇ
ಗೋವಿಗೆ ಪೂಜ್ಯ ಸ್ಥಾನವನ್ನೂ ನೀಡಿದ್ದರು. ನಂದಿಯ ಶೃಂಗದ ಮೂಲಕ ಈಶ್ವರದರ್ಶನವನ್ನು ಮಾಡುವ
ಪದ್ಧತಿಯಿದ್ದು, ನಂದಿಯು ಸಾಂಕೇತಿಕವಾಗಿ ಜೀವಾತ್ಮನನ್ನು ಪ್ರತಿನಿಧಿಸುತ್ತದೆ, ನಂದಿಯು ಸದಾ ಈಶ್ವರನ ಎದುರಿಗೇ
ಇದ್ದು ಪರಮೇಶ್ವರನನ್ನು ಅವಲೋಕಿಸುತ್ತಿರುವುದೋ ಅದೇ ರೀತಿಯಲ್ಲಿ ಭಕ್ತನೂ ಸಹ ಆ ಈಶ್ವರನ
ಸಾಕ್ಷಾತ್ಕಾರಕ್ಕಾಗಿ ಪರಮಾತ್ಮನನ್ನು ತದೇಕಚಿತ್ತನಾಗಿ ಧ್ಯಾನಿಸಬೇಕು ಎಂಬುದೇ ಶಿವದೇವಾಲಯಗಳಲ್ಲಿ ನಂದಿಯನ್ನು
ಪ್ರತಿಷ್ಠಾಪಿಸುವ ಉದ್ದೇಶವಾಗಿದೆ. ಭಾರತೀಯ ಗೋವಂಶ ಉಳಿವಿಗಾಗಿ ಸಾವಿರಾರು ಸಂರಕ್ಷಣಾ ಕೇಂದ್ರಗಳು
ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಕರ್ನಾಟಕ ರಾಜ್ಯದಲ್ಲೇ ಸುಮಾರು ಎಂಭತ್ತು ಗೋಶಾಲೆಗಳಿವೆ. ದೇಸೀ
ಗೋತಳಿಗಳ ಸಂರಕ್ಷಣೆ ಈ ಎಲ್ಲ ಗೋಶಾಲೆಗಳ ಮೂಲ ಉದ್ಧೇಶವಾದರೂ ಪ್ರತಿಯೊಂದು ಕೇಂದ್ರದ
ಕಾರ್ಯವಿಧಾನವೂ ತನ್ನದೇ ಆದ ವಿಶೇಷತೆ ಹಾಗೂ ಹೊಸತನವನ್ನು ಅಳವಳಡಿಸಿಕೊಳ್ಳುವ ಮೂಲಕ ಭಿನ್ನವಾಗಿದೆ.
ಉದ್ದೇಶ : ಗೋಶಾಲೆ-ಗೋಸಂರಕ್ಷಣೆ
ಗೋವು ಕೇವಲ ಪ್ರಾಣಿಯಲ್ಲ, ಅದು ಭಾರತದಂತಹ ರಾಷ್ಡ್ರಕ್ಕೆ ಆರ್ಥಿಕ ಬೆನ್ನುಲುಬು. ಇಂದು ಸುಧಾರಿತ ಕೃಷಿ
ಪದ್ದತಿಯ ಹೆಸರಿನಲ್ಲಿ ಗೋವನ್ನು ಕಡೆಗಣಿಸಿ ರಾಸಾಯನಿಕ ಗೊಬ್ಬರ ಕೀಟನಾಶಕಗಳನ್ನು ಬಳಸಿ ಸಂಪೂರ್ಣ
ಭೂಮಿಯನ್ನು ಹಾಳುಗೆಡವಿದ್ದೇವೆ. ರಾಸಾಯನಿಕಗಳ ಬಳಕೆಯಿಂದಾಗಿ ಇಂದು ನಾವು ಬಳಸುತ್ತಿರುವ ಅಹಾರವೂ ಸಹ
ವಿಷವಾಗಿದೆ. ಆದ್ದರಿಂದಲೇ ಗವಾಧಾರಿತವಾದ ಸಾವಯವ ಕೃಷಿ ಪದ್ಧತಿಗೆ ವ್ಯಾಪಕ ಪ್ರೋತ್ಸಾಹ ದೊರೆಯುತ್ತಿದೆ. ಈ
ಎಲ್ಲ ಹಿನ್ನೆಲೆಯಲ್ಲಿಯೇ ಸಮಾಜ ಸೇವಾ ಸಮಿತಿಯು ಗೋಶಾಲೆಯೊಂದನ್ನು ಪ್ರಸ್ತಾವಿತ ಸ್ಥಳವಾದ ಚಿತ್ರದುರ್ಗ
ಜಿಲ್ಲೆಯ ಹಿರಿಯೂರು ತಾಲೂಕಿನ, ಗೌನಳ್ಳಿಯ ಗೋಗುದ್ಧದಲ್ಲಿ ಅರಂಭಿಸುತ್ತಿದೆ. ಗವ್ಯೋತ್ಪನ್ನ ಔಷಧಿಗಳ
ತಯಾರಿಕೆಯನ್ನು ಸಹ ಸಮಿತಿ ವತಿಯಿಂದ ನಡೆಸಲಾಗುವುದು. ಮುಖ್ಯವಾಗಿ ಸ್ಥಳೀಯ ಕೃಷಿಕರಿಗೆ ಗೋವುಗಳ ಸಂರಕ್ಷಣೆ
ಮತ್ತು ಕೃಷಿಯಲ್ಲಿನ ಉಪಯೋಗದ ಬಗ್ಗೆ ತರಬೇತಿ ನೀಡುವುದರ ಜೊತೆಗೆ, ಅವರ ಕೃಷಿ ಚಟುವಟಿಕೆಗೆ ವಿಜಯರಾಘವ
ಗೋಶಾಲೆ”ಯ ಗೋವುಗಳ ಸದುಪಯೋಗ ಪಡೆದುಕೊಳ್ಳಲು ಪ್ರಯತ್ನಿಸಲಾಗುವುದು.
ಕಸಾಯಿ ಖಾನೆಗಳಿಗೆ ಅಕ್ರಮವಾಗಿ ಮಾರಾಟವಾಗುವ ಹಸುಗಳ ಸಂರಕ್ಷಣೆ ಮತ್ತು ಅವುಗಳ ಸಾಕಾಣಿಕೆಯೇ
ಯೋಜನೆಯೇ ಮೂಲ ಉದ್ದೇಶ.
ಭಾರತೀಯ ದೇಶೀ ಗೋ ತಳಿಗಳ ಮಹತ್ವದ ಬಗ್ಗೆ ಭಾರತದ ರೈತರಲ್ಲಿ ಜಾಗೃತಿ ಉಂಟುಮಾಡುವುದು.
ಸಾವಯವ ಗೊಬ್ಬರ ಒಕ್ಕಲುತನಕ್ಕೆ ಅವಶ್ಯಕ ಎನ್ನುವುದರ ಬಗ್ಗೆ ತಿಳುವಳಿಕೆ
ದೇಸಿ ಆಕಳುಗಳ ಮೂತ್ರ ಮತ್ತು ಸೆಗಣಿಯನ್ನು ಭೂಮಿಗೆ ನೀಡುವುದರಿಂದ ಬೆಳೆಗಳ ಇಳುವರಿ ಹೆಚ್ಚುವರಿ ಬಗ್ಗೆ
ರೈತರಿಗೆ ತಿಳಿವಳಿಕೆ
ಅರ್ಹ ರೈತರಿಗೆ ಉಳುಮೆಗಾಗಿ ಎತ್ತಿನ ಜೋಡಿಯನ್ನು ಉಚಿತವಾಗಿ ಕೊಡುವ ಯೋಜನೆ
ಗೋ ಆಧಾರಿತ ಕೃಷಿ ಬಗ್ಗೆ ಜನ ಜಾಗೃತಿ ಮೂಡಿಸುವುದು
ಗೋ ಉತ್ಪನ್ನಗಳ ತರಬೇತಿ ಕೇಂದ್ರ - ಸ್ಥಳೀಯರ ಭಾಗವಹಿಸುವಿಕೆ, ಅವುಗಳಲ್ಲಿಯೂ ಮುಖ್ಯವಾಗಿ
ಗೋಮೂತ್ರ, ಗೋಮಯಗಳನ್ನು ಬಳಸಿಕೊಂಡು ಹಲವಾರು ಉತ್ಪನ್ನಗಳನ್ನು ತಯಾರಿಸಿ ಅವುಗಳಿಗೆ ಸೂಕ್ತ
ಮಾರುಕಟ್ಟೆಯನ್ನು ಕಲ್ಪಿಸುವುದು ಯೋಜನೆಯ ಉದ್ದೇಶ. ಗೋ ಮೂತ್ರದಿಂದ ಗೋ ಅರ್ಕ, ಸೆಗಣಿಯಿಂದ
ಗೋಮಯ ಖಂಡ, ಫಿನಾಯಿಲ್, ಸೊಳ್ಳೆ ಬತ್ತಿ ... ಇತ್ಯಾದಿ
ಸಾವಿರಾರು ಆರೋಗ್ಯವಂತ ದನಗಳನ್ನು ಈ ಯೋಜನೆಯಡಿ ಸಂರಕ್ಷಿಸಿ ಗೋಬ್ಯಾಂಕ್ ಮೂಲಕ ಯೋಗ್ಯ
ರೈತರಿಗೆ ದಾನ ಮಾಡುವುದು.
ಭಾರತೀಯ ಗೋ ತಳಿಗಳ ದತ್ತುಸ್ವೀಕಾರ ಯೋಜನೆ.
ಗೋ-ಉತ್ಪನ್ನಗಳಿಂದ ಪ್ರಯೋಜನಗಳು:
ಗೋವಿನ ತುಪ್ಪದಿಂದ ದೀಪ ಉರಿಸಿದರೆ ಪರಿಸರ ಮಾಲಿನ್ಯ ನಿವಾರಣೆ ಆಗುತ್ತದೆ ಹಾಗೂ ನಮ್ಮ ಆರೋಗ್ಯ
ವೃದ್ಧಿಯಾಗುತ್ತದೆ.
ಗೋಉತ್ಪನ್ನಗಳ ಔಷಧಿಗಳಿಂದ ನೋವು ನಿವಾರಿಸುವ ನೋವಿನ ಎಣ್ಣೆ, ಮಕ್ಕಳಿಗೆ ಸ್ವಾಸ್ಥ್ಯ ನೀಡುವ -ಮಕ್ಕಳ ಟಾನಿಕ್,
ಹಲ್ಲುಗಳ ಆರೋಗ್ಯವನ್ನು ಕಾಪಾಡುವ ಷೋಡಶಿ-ದಂತಮಂಜನಗಳು, ಚಿಕನ್ಗುನ್ಯ ಜ್ವರಕ್ಕೆ ಔಷದಿ,
ಜನರ ಸಹಭಾಗಿತ್ವದಲ್ಲಿ ನಡೆಸುವ ಗೋಶಾಲೆಯು ಸುತ್ತಲಿನ ಗ್ರಾಮಗಳಿಗೆ ಬೇಕಾದ ಹಾಲು ಮತ್ತು ಹಾಲಿನ
ಉತ್ಪನ್ನಗಳ ಅಗತ್ಯವನ್ನು ಪೂರೈಸುವುದು. ಜೊತೆಗೆ ಗೋ ಉತ್ಪನ್ನಗಳನ್ನು ತಯಾರಿಸುವ ಕಿರು ಉದ್ಯಮವನ್ನು ನಡೆಸಿ
ಕೆಲವರಿಗೆ ಉದ್ಯೋಗ ನೀಡಬಹುದು, ಗೋಬರ್ ಗ್ಯಾಸ್ ಅದರ ಮೂಲಕ ವಿದ್ಯುತ್ ಉತ್ಪಾದನೆ, ಸಾವಯವ ಗೊಬ್ಬರ
ತಯಾರಿ ಹೀಗೆ ಅನೇಕ ಗೋಶಾಲೆ ಕೇಂದ್ರಿತ ಆರ್ಥಿಕ ಚಟುವಟಿಕೆಗಳನ್ನು ನಡೆಸಬಹುದು.
ಸಂರಕ್ಷಣೆ, ಸಂಶೋಧನೆ, ಸಂಬೋಧನೆ - ಎಂಬ ಧ್ಯೇಯೋದ್ದೇಶಗಳು.
ಸಂರಕ್ಷಣೆ : ಭಾರತ ದೇಶದಲ್ಲಿ ಸುಮಾರು ನೂರಕ್ಕೂ ಹೆಚ್ಚು ಗೋತಳಿಗಳು ಇದ್ದ ಉಲ್ಲೇಖಗಳು ಇದ್ದರೂ, ಈಗ
ಅವುಗಳಲ್ಲಿ ಹೆಚ್ಚಿನವೂ ನಿರ್ನಾಮಗೊಂಡಿವೆ. ಮೂಲ ತಳಿಗಳ ನಿರ್ನಾಮಕ್ಕೆ ಕಾರಣ - ತಳಿಸಂಕರ, ಅಪೌಷ್ಟಿಕತೆ, ಬರ-ನೆರೆ
ಪ್ರಾಕೃತಿಕ ವಿಕೋಪಗಳು, ರೈತರ ಮೇಲೆ ಕಸಾಯಿಖಾನೆಗಳ ಹಿಡಿತ - ಇತ್ಯಾದಿ. ಈಗ ಭಾರತದಲ್ಲಿ ಲಭ್ಯವಿರುವ ಒಟ್ಟು
ಮೂವತ್ತೆರಡು ಪ್ರಭೇದದ ದೇಶೀ ಗೋವುಗಳನ್ನು ಸಂರಕ್ಷಿಸಿಡುವುದು, ಹಾಗೂ ಆ ದನಕರುಗಳ ಮಹತ್ವವನ್ನು
ದೇಶದೆಲ್ಲೆಡೆ ಪ್ರಸಾರ ಮಾಡುವುದು ಇದರ ಉದ್ದೇಶ.
ಸಂಶೋಧನೆ : ಭಾರತೀಯ ದೇಶೀಯ ಗೋವುಗಳ ಹಿರಿಮೆಯನ್ನು ಸಾರುವಂತಹ ವೈಜ್ಞಾನಿಕ, ಧಾರ್ಮಿಕ, ಆಧ್ಯಾತ್ಮಿಕ
ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ. ದೇಶೀಯ ದನಗಳ ಹಾಲಿಗೆ ಪಾಶ್ಚಾತ್ಯ ದನಗಳ
ಅಥವಾ ತಳಿಸಂಕರಗೊಂಡ ದನಗಳ ಹಾಲಿನದ್ದಕ್ಕಿಂತ ವಿಶೇಷ ಸತ್ವಗಳು ಹೆಚ್ಚಿವೆ ಎಂಬುದನ್ನು ಈಗಾಗಲೇ
ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ಇದಲ್ಲದೇ, ಗೋಮೂತ್ರ, ಗೋಮಯ, ಗೋ ಅರ್ಕಗಳನ್ನು ಸಂಶೋಧಿಸಿ
ಅವುಗಳಲ್ಲಿರುವ ಉಪಕಾರಿ ಅಂಶಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಒಳಗೊಂಡಿರುತ್ತದೆ.
ಗವ್ಯೋತ್ಪನ್ನಗಳನ್ನು ತಯಾರಿಸಿ ಸಮಾಜಕ್ಕೆ ತಲುಪಿಸಲಾಗುವುದು.
ಸಂಬೋಧನೆ : ಭಾರತೀಯ ಗೋವಂಶ, ಗೋತಳಿಗಳ ಬಗ್ಗೆ ವಿಷಯಗಳ ಪ್ರಚಾರ - ಪ್ರಸಾರವನ್ನು ಮಾಡುವುದು.
ರೈತರಿಗೆ ಭಾರತೀಯ ಗೋವುಗಳ ಬಗ್ಗೆ, ಅವುಗಳ ಬಹುಪಯೋಗಿ ಗುಣಗಳ ಬಗ್ಗೆ ವಿಷಯಗಳನ್ನು ತಿಳಿಸುವ ಮೂಲಕ
ಗೋವುಗಳ ರಕ್ಷಣೆ ನಡೆಸುವಲ್ಲಿ ಸಂಬೋಧನೆಯು ಪಾತ್ರ ನಿರ್ವಹಿಸುವುದು. ಭಾರತೀಯ ಗೋವುಗಳ ಬಗ್ಗೆ ಸಮಗ್ರ
ಮಾಹಿತಿಯನ್ನು ತಿಳಿಸುವ ಪ್ರಯತ್ನ ಮಾಡುವುದು... ಇತ್ಯಾದಿ.
ಈ ಕೆಲಸ ಕಾರ್ಯಗಳಿಗೆ ಧನ ಸಹಾಯದ ಅಗತ್ಯ ಇದ್ದು ತಮ್ಮ ತನು-ಮನ- ಧನದ ಸಹಕಾರವನ್ನು ಗೋಶಾಲೆ
ಅಪೇಕ್ಷಿಸುತ್ತದೆ
ಪುಣ್ಯಕೋಟಿಯ ಸೇವೆ ಮಾಡೋಣ. ಕೋಟಿ ಪುಣ್ಯವನ್ನು ಗಳಿಸೋಣ
ಗೋ ಸಾಕಣೆ ಕೇವಲ ಹಾಲಿಗಾಗಿ ಅಲ್ಲ. ಅದೊಂದು ಸೇವೆ, ಅದು ನಮ್ಮ ಕರ್ತವ್ಯ